Tuesday, April 16, 2013
Wednesday, April 3, 2013
ನೋವಿಗೊಂದು ಹಿತ್ತಲ ಮದ್ದು ..
ಕೆಲವೊಮ್ಮೆ ಬೆನ್ನು ಬಾಗ , ಕಾಲು , ಕೈ ಗಳು ಉಳುಕಿದಂತಾಗಿ ನೋವನ್ನು ಅನುಭವಿಸಲು ಬಹಳ ಕಷ್ಟವಾಗುತ್ತದೆ . ನಿಂಬೆ ಹಣ್ಣನ್ನು ಎಣ್ಣೆಗೆ ಬೆರಸಿ (ನಾಲ್ಕು ಚಮಚ ನಿಂಬೆ ರಸಕ್ಕೆ ಒಂದು ಚಮಚ ಕೊಬರಿ ಎಣ್ಣೆ ) , ನಿಧಾನವಾಗಿ ನೋವಿರುವ ಜಾಗಕ್ಕೆ ಬೆರಸಿ. ನೋವಿಗೆ ಅತೀ ಬಹಳ ಉತ್ತಮ ಔಷದಿ .
Sunday, November 25, 2012
ಮಲಬದ್ದತೆ ತೊಂದರೆ ಇದ್ದವರಿಗೆ .....
ಸೋನಾಮುಖಿ ಸೊಪ್ಪನ್ನು ಎರಡು ಚಮಚದಷ್ಟು ಪ್ರಮಾಣಕ್ಕೆ ಮೂರು ಲೋಟ ನೀರು ಸೇರಿಸಿ ಒಂದುಲೋಟ ಪ್ರಮಾಣಕ್ಕೆ ಕುದಿಸಿ ಬತ್ತಿಸಿ ಕಷಾಯ ಮಾಡಿ ರಾತ್ರಿ ಮಲಗುವಾಗ ಕುಡಿಯಬೇಕು. ಸೊಪ್ಪನ್ನು ಹೆಚ್ಚು ಪ್ರಮಾಣದಲ್ಲಿ ಸೇರಿಸಿಕೊಂಡರೆ ಬೇದಿಯಾಗುವ ಅಪಾಯವಿದೆ .
ಗ್ರಂದಿಗೆ ಅಂಗಡಿಯಲ್ಲಿ ಸೋನಾಮುಖಿ ಸೊಪ್ಪು ದೊರೆಯುತ್ತದೆ
ಸಲಹೆ : ಎಂ ಗಣಪತಿ ಕಾನುಗೋಡು
Wednesday, August 15, 2012
ಬಾಯಿಯ ದುರ್ವಾಸನೆಗೆ .....
ನಮ್ಮ ಬಾಯಿ ವಾಸನೆ ಬರ್ತಾ ಇದ್ರೆ .. ಪ್ರತಿ ದಿನ ಮಲಗುವ ಮುನ್ನ ಉಪ್ಪು ನೀರನ್ನು ಮುಕ್ಕಳಿಸಿ ಮಲಗಿದರೆ ನಮ್ಮ ಬಾಯಿಯ ವಾಸನೆ ಸುಗಂದಬರಿತವಾಗುತ್ತದೆ ...
Tuesday, July 26, 2011
ಕುರ ಗಳಿತು ಒಡೆಯಲು ಒಳ್ಳೆ ಔಷಧಿ . . .
ಕುರದಿಂದ ನೋವನ್ನು ಅನುಭವಿಸುವ ಕೆಟ್ಟ ನೋವು ಮತ್ತೊಂದಿಲ್ಲ .. ಕುರ ಸರಿಯಾಗಿ ಗಳಿತು ಒಡೆದರೆ ಮತ್ತೆ ಬರುವುದಿಲ್ಲವಂತೆ . ಹಾಗಂತ ಒಮ್ಮೆ ಏನಾದರೂ ಸರಿಯಾಗಿ ಗಳಿಯದೆ ಒಡೆದರೆ ಮತ್ತೆ ಬರುವ ಸಂಭವವಿದೆ . ಪ್ರಾಕೃತಿಕವಾಗಿ ಕುರ ಗಳಿಯಲು ಅನೇಕ ದಿನ ಬೇಕು . ಅಲ್ಲಿಯವರೆಗಿನ ನೋವಿನ ಬೇನೆ ಬಹಳ ಕಷ್ಟ . ಕುರ ಗಳಿತು ಒಡೆದ ದಿನ ಮತ್ಹ್ತ್ಹೊಂದು ಜನ್ಮ ಪಡೆದ ಅನುಭವ !.
ಹಾಗಿದ್ದರೆ ನಾವು ಈಗ ಅಷ್ಟು ದಿನಗಳ ವರೆಗೆ ಕಾಯುವದು ಬೇಕಿಲ್ಲ .
ಉದ್ದಿನ ಬೆಲೆಯನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಅರೆದು ನಿನ್ನಗೆ ಮಾಡಿ ಕುರದ ಬಾಯನ್ನು ಬಿಟ್ಟು ಸುತ್ತ ಹಚ್ಚಿ ಬಿಡಿ. ಇದನ್ನು ಬೆಳಗ್ಗೆ ಒಮ್ಮೆ ರಾತ್ರೆ ಒಮ್ಮೆ ಮಾಡಿ ನೋಡಿ . ಮರುದಿನ ನಿಮ್ಮ ಕುರ ಪ್ರಾಕ್ರುಥಿಕವಾಗಿಯೇ ಬೆಳೆದು ಒಡೆದುಬಿಡುತ್ತದೆ. ನಿಮಗೆ ನಿಮ್ಮ ಕುರದ ಬೇನೆ ಒಂದು ಅಥವಾ ಎರಡು ದಿನದಲ್ಲಿ ಅಗೋಚರ . :)
-------------------------------------------------------------------------------

ಬಿಳಿ ಚಿಬ್ಬಿಗೆ
ಕೆಲವೊಮ್ಮೆ ನಮ್ಮ ಮೈಮೇಲೆ ಬಿಳಿ ಬಿಳಿಯಾಗಿ ಚಿಬ್ಬಿ ಇರುತ್ತದೆ . ಇದರಿಂದ ದುಷ್ಪರಿಣಾಮ ಏನೂ ಇಲ್ಲದಿದ್ದರೂ ಬಿಳಿ ಕಲೆಗಳು ನಮ್ಮನ್ನು ಅಸಹ್ಯಗೊಲ್ಲುವಂತೆ ಮಾಡುತ್ತದೆ .
ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ.
ಕಲ್ಲು ಶುಂಟಿ ಯನ್ನು ನಿಂಬೆ ಹಣ್ಣಿನೊಡನೆ ತ್ಯೇಯ್ದು ೫ ದಿನ ದಿನಕ್ಕೆರಡು ಬಾರಿಯಂತೆ ಹಚ್ಚಿ . ನಿಮ್ಮ ಮೈಮೇಲಿರುವ ಚಿಬ್ಬಿ ಮಂಗ ಮಾಯಾ .
- -------------------------------------
ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ.
ಕಲ್ಲು ಶುಂಟಿ ಯನ್ನು ನಿಂಬೆ ಹಣ್ಣಿನೊಡನೆ ತ್ಯೇಯ್ದು ೫ ದಿನ ದಿನಕ್ಕೆರಡು ಬಾರಿಯಂತೆ ಹಚ್ಚಿ . ನಿಮ್ಮ ಮೈಮೇಲಿರುವ ಚಿಬ್ಬಿ ಮಂಗ ಮಾಯಾ .
- -------------------------------------
Thursday, June 9, 2011
ಹೊಟ್ಟೆ ಮುರಿತಕ್ಕೆ - ಬೇದಿಗೆ
ನಾವು ಅನೇಕ ಬಾರಿ ಹೊಟ್ಟೆ ಮುರಿತದ ಅನುಭವವನ್ನು ಬಹಳವಾಗಿ ಅನುಭವಿಸುತ್ತೇವೆ . ಇದು ಯಾವುದೇ ಆಹಾರ ತೊಂದರೆ ಆಗಿರಬಹುದು . ಅದರಲ್ಲೂ ನಮಗೆ ಎಲ್ಲಾದರೂ ಪ್ರಯಾಣ ಇರುವಾಗ ಈ ಹೊಟ್ಟೆ ಮುರಿತ ಪ್ರಯಾಣವನ್ನ ರದ್ದು ಗೊಳಿಸುವ ನಿರ್ಣಾಯಕ್ಕೆ ಎಡೆಮಾಡಿಕೊಡುತ್ತದೆ .
ಹೆದರುವ ಅವಶ್ಯಕತೆ ಇಲ್ಲ . ಕಾಡು ಅರಿಶಿನ ಅಥವಾ ಅರಾರೋಟನ್ನು ಒಂದು ಲೌಟ ಮಜ್ಜಿಗೆಗೆ ಹಾಕಿ ಕುಡಿದುಬಿಡಿನಿಮ್ಮ ಹೊಟ್ಟೆ ಮುರಿತ ಅಥವಾ ಬೇದಿಅನುಭವ ಬಂದ್ !!
- ಅಮರ ಕೆ ಜಿ ಕಾನುಗೋಡು .
Subscribe to:
Posts (Atom)